ಜೂಡಿ ನ್ಯೂಸ್ :
ನೀವು ಹೇಳಿದ ಕೆಲಸ ಮಾಡುತ್ತೇನೆ : ಅಮ್ಜದ್ ಪಟೇಲ್ ಆಶ್ವಾಸನೆ
ಕೊಪ್ಪಳ : ನೀವು ಹೇಳಿದ ಕೆಲಸ ಮಾಡುತ್ತೇನೆ. ಅನುದಾನ ಬರಲಿದೆ ಎಂದು ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಆಶ್ವಾಸನೆ ನೀಡಿದರು.
ನಗರದ ಕಲ್ಯಾಣ ನಗರದಲ್ಲಿ ಸೋಮವಾರ ದೀಪಾವಳಿ ಸಂದರ್ಭದಲ್ಲಿ ಮಾರುತಿ ಗುಡಿ ಸಮೀಪ ಎತ್ತರದ ದೀಪಸ್ತಂಭ (ಹೈಮ್ಯಾಕ್ಸ್) ವನ್ನು ಉದ್ಘಾಟಿಸಿ ಬಳಿಕ ಕಲ್ಯಾಣ ನಗರದ ಆಂಜನೇಯ ಸಮಿತಿಯ ಅಧ್ಯಕ್ಷ ಹನುಮಂತಪ್ಪ ಗೊಂದಿ ಕಲ್ಯಾಣ ನಗರದ ವತಿಯಿಂದ ಸನ್ಮಾನ ಸ್ವೀಕರಿಸಿದ ಅಮ್ಜದ್ ಪಟೇಲ್ ಮಾತನಾಡಿ ಕಲ್ಯಾಣ ನಗರದಲ್ಲಿ" ನನಗೆ ಎರಡು ಮೂರು ಸಲ ಸನ್ಮಾನ ಮಾಡಿದ್ದೀರಿ. ನೀವು ಕಲ್ಯಾಣ ನಗರದವರು ಸೌಜನ್ಯದಿಂದ ಮಾತಾಡಿ ನಿಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತಿರಿ ನಿಮ್ಮಂಥ ಒಳ್ಳೆಯ ಜನರಿಗೆ ಕೆಲಸ ಮಾಡಿಕೊಡಬೇಕಾಗಿದೆ.ನಾನು ಅಧ್ಯಕ್ಷನಾಗಿರಲಿ, ಇಲ್ಲದಿರಲಿ ನಿಮ್ಮ ಕಾರ್ಯ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಕಲ್ಯಾಣ ನಗರದ ಹಿರಿಯ ಮುಖಂಡ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಕಲ್ಯಾಣ ನಗರದಲ್ಲಿ ರಸ್ತೆಗಳು ಸರಿಪಡಬೇಕು. ಚರಂಡಿಗಳು ಆಗಬೇಕು,ಕಲ್ಯಾಣ ನಗರದ ಉದ್ಯಾನದಲ್ಲಿ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಹಾಕಿಸಬೇಕು,ಸಮುದಾಯ ಭವನ ಕಟ್ಟಬೇಕು,ಹೋದ ಲೈಟುಗಳನ್ನು ಹಾಕಬೇಕು ಎಂದು ವಿವರಿಸಿದರು.
ಕಲ್ಯಾಣ ನಗರದ ಪ್ರಮುಖರು ಸೇರಿದ್ದ ಸಂದರ್ಭದಲ್ಲಿ ನವೆಂಬರ್ ೧ ರಾಜ್ಯೋತ್ಸವ ದಿನದಂದು ಕಲ್ಯಾಣ ನಗರದ ನಾಗರಿಕರು ಎಂ.ಎಸ್.ಪಿ.ಎಲ್ ಕಾರ್ಖಾನೆ ಮತ್ತು ಇತರ ಕಾರ್ಖಾನೆ ಪರಿಸರ ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಶೋಕ ವೃತ್ತದಲ್ಲಿ ನಡೆಯುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ನಿರ್ಧರಿಸಿದರು. ಓಣಿಯ ಅನೇಕ ನಾಗರಿಕರು ಭಾಗವಹಿಸಿದ್ದರು.
ಹಿರಿಯರಾದ ಹನುಮಂತಪ್ಪ ಗೊಂದಿ ಸಭೆಯನ್ನು ಸಂಘಟಿಸಿ ಕೊನೆಯಲ್ಲಿ ವಂದಿಸಿದರು.

Comments
Post a Comment