ಸಾಂಸ್ಕøತಿಕ ದಿಗ್ಗಜ ರಮೇಶ ಸುರ್ವೆಗೆ ಅಥಣಿಯ
ಶ್ರೀಮೋಟಗಿ ಮಠದಿಂದ ಕರುನಾಡ ಕಲಾಭೂಷಣ ಪ್ರಶಸ್ತಿ
ಜೂಡಿ ನ್ಯೂಸ್ :
ಈ ದೇಶದ ಸಮಾಜಕ್ಕೆ ಬೇಕಿರುವುದು ಸಾಮರಸ್ಯದ ಸಂಸ್ಕøತಿ. ಈ ನಿಟ್ಟಿನಲ್ಲಿ 11, 12, 13 ಜನವರಿ 2025ರಂದು ಮೂರು ದಿನಗಳ ಕಾಲ ಅಥಣಿಯ ಶ್ರೀಮೋಟಗಿ ಮಠದ ಆಶ್ರಯದಲ್ಲಿ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು (ಶ್ರೀ ಅಥಣೀಶ) ನೇತೃತ್ವದಲ್ಲಿ ಈ “ಸಾಮರಸ್ಯದ ಸಮಾಜೋತ್ಸವ” ಮಹಾನ ಧಾರ್ಮಿಕ ಉತ್ಸವ ಜರುಗಲಿದೆ.

ಈ ಸಂಕಲ್ಪ ಉತ್ಸವದಲ್ಲಿ ನಾಡಿನ ಪ್ರಮುಖ ಮಠಾಧೀಶರು, ಸಚಿವರು, ಗಣ್ಯರು ಮೂರು ದಿನವು ಭಾಗವಹಿಲಿದ್ದಾರೆ. ಸಕಲ ಧಾರ್ಮಿಕ ವಿಧಿ, ವಿಧಾನಗಳ ಸಮಾರಂಭಗಳ ಮದ್ಯೆ ನಾಡಿನ ಸಾಧಕರನ್ನು ಗೌರವಿಸುವ ಮೂಲಕ, ಈ ಸಮಾವೇಶದಲ್ಲಿ ಗೌರವಿಸಲ್ಪಡುತ್ತಿರುವ ಸಾಧಕರಲ್ಲಿ ಬೆಂಗಳೂರು ನಗರ ನಿವಾಸಿ, ಕೊಪ್ಪಳ ಜಿಲ್ಲೆಯ ಕುಕನೂರಿನ ಇತಿಹಾಸ ಪ್ರಸಿದ್ಧ ಇಟಗಿ ಮೂಲದ, ಸಾಂಸ್ಕøತಿಕ ಲೋಕದ ದಿಗ್ಗಜ, ಹಿರಿಯ ಪತ್ರಕರ್ತ, ರಂಗತಜ್ಞ, ಲೇಖಕ ರಮೇಶ ಸುರ್ವೆಯವರಿಗೆ ದಿನಾಂಕ 13-1-2025 ರಂದು “ಕರುನಾಡ ಕಲಾಭೂಷಣ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ.

ಸಮಾರಂಭದಲ್ಲಿ ಶ್ರೀ ಜಗದ್ಗುರು ಸಿದ್ಧ ಸಂಸ್ಥಾನಮಠದ ಪೂಜ್ಯಶ್ರೀ ಶಿವಲಿಂಗೇಶ್ವರ ಸ್ವಾಮಿಗಳು, ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸದ್ಗುರು ಯಲ್ಲಾಲಿಂಗೇಶ್ವರಮಠದ ಪೂಜಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದು, ಅಭಿನಂದನಾ ನುಡಿಯನ್ನು ಶ್ರೀ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮಿಗಳು ಮಾತನಾಡಲಿದ್ದಾರೆ. ದಿವ್ಯ ನೇತೃತ್ವವನ್ನು ಬಸವಗೋಪಾಲ ನೀಲಮಾಣಿಕಮಠದ ಪೂಜಶ್ರೀ ದಾನೇಶ್ವರ ಸ್ವಾಮಿಗಳು ವಹಿಸಿದ್ದಾರೆ. ಅಧ್ಯಕ್ಷೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಶ್ರೀ ಶ್ರೀಮಂತ ಪಾಟೀಲ್, ಶ್ರೀ ಆನಂದ ನ್ಯಾಮಗೌಡ, ಶ್ರೀ ಧುರ್ಯೋಧನ ಐಹೊಳೆ, ಕರವೇ ಅಧ್ಯಕ್ಷ ಶ್ರೀ ಪ್ರವೀಣ ಶೆಟ್ಟಿ, ಧುರೀಣರಾದ ಶ್ರೀ ಗಜಾನನ ಮಂಗಸೂಳಿ ಉಪಸ್ಥಿತರಿರುತ್ತಾರೆಂದು ಶ್ರೀಮೋಟಗಿ ಮಠದ ವಕ್ತಾರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments