ಕಾಲೇಜು ವಿದ್ಯಾರ್ಥಿಗಳಿಗೆ ಬೆಂಗಳೂರು ಅಪರಾಧ ತನಿಖಾ ಇಲಾಖೆ (ಸಿಐಡಿ) ಯಿಂದ ಆರ್ಥಿಕ ಜಾಗೃತಿ ಅಭಿಯಾನ ಕಾರ್ಯಕ್ರಮ
ಜೂಡಿ ನ್ಯೂಸ್ :
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ನಮ್ಮ ಧನ ಸುರಕ್ಷಾ ಮಾಡಿಕೊಳ್ಳಲು ಆರ್ಥಿಕ ಜಾಗೃತಿ ಅವಶ್ಯವಾಗಿದೆ ಎಂದು ಅಪರಾಧ ತನಿಖಾ ಇಲಾಖೆ (ಸಿ ಐ ಡಿ) ಬೆಂಗಳೂರು ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ವಿ. ಟಿ. ಯವರು ಹೇಳಿದರು.
ನಗರದ ಕೊಲ್ಲಿ ನಾಗೇಶ್ ರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನ ಅಂಬೇಡ್ಕರ್ ಸಭಾಭವನದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ಆರ್ಥಿಕ ಜಾಗೃತಿ ಶಿಬಿರದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳಿಗೆ ಮಾಹಿತಿ ನೀಡಿದರು
ನಮ್ಮ ಧನ ಸುರಕ್ಷಾ ಕಾಪಾಡಿಕೊಳ್ಳಲು ನಾವು ಮುಖ್ಯವಾಗಿ ಸೈಬರ್ ಕ್ರೈಂ ಅಪರಾಧ ದಿಂದ ಜಾಗೃತರಾಗಲು ಹಲವಾರು ಕಾರಣಗಳು ಮತ್ತು ಅದಕ್ಕೆ ರಕ್ಷಣೆಗಳು ಕುರಿತು ಸುದೀರ್ಘವಾಗಿ ಮಾತನಾಡಿದರು.
ಸೈಬರ್ ಕ್ರೈಂ ಅನ್ನು ಹಣ ಸಂಪಾದಿಸಲು ಬಯಸುವ ಹ್ಯಾಕರುಗಳು ಮಾಡುತ್ತಾರೆ. ಸೈಬರ್ ಕ್ರೈಮ್ ನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು ನಡೆಸಬಹುದು. ಕೆಲವು ಸೈಬರ್ ಅಪರಾಧಿಗಳು ಸಂಘಟಿತರಾಗಿದ್ದಾರೆ ,ಸುಧಾರಿತ ತಂತ್ರಜ್ಞಾನದ ತಂತ್ರಗಳನ್ನು ಬಳಸಿ ಹೆಚ್ಚು ಹೆಚ್ಚು ತಾಂತ್ರಿಕವಾಗಿ ನುರಿತರಾಗಿದ್ದಾರೆ
ಸೈಬರ್ ಅಪ್ಪಾದಗಳಲ್ಲಿ ಮುಖ್ಯವಾದವುಗಳು ಈ ಮೇಲ್ ಮತ್ತು ಇಂಟರ್ನೆಟ್ ವಂಚನೆ, ಗುರುತಿನ ವಂಚನೆ, ಹಣಕಾಸು ಅಥವಾ ಕಾರ್ಡ ಪಾವತಿ ಡೇಟಾ ದ ಕಳ್ಳತನ, ಬೆದರಿಕೆಯ ದಾಳಿಯನ್ನು ತಡೆಯಲು ಹಣದ ಬೇಡಿಕೆ, ಆನ್ಲೈನ್ ನಲ್ಲಿ ಅಕ್ರಮ ವಸ್ತುಗಳ ಮಾರಾಟ, ಅಕ್ರಮ ಜೂಜಾಟ, ಹೈಪರ್ ಲಿಂಕ್ ಗಳಿಂದ ಬ್ಯಾಂಕ್ ವಿವರ ವೈಯಕ್ತಿಕ ಮಾಹಿತಿ ಕದಿಯ ಬಹುದು, ವಂಚನೆಗಳು ಆನ್ಲೈನ್ ಮಾರ್ಕೆಟ್ ಮೂಲಕ ಪದೇ ಪದೇ ಅತಿ ಕಡಿಮೆ ವೆಚ್ಚಕ್ಕೆ ವಸ್ತುಗಳು ಮಾರುವಂತೆ ಜಾಹೀರಾತು ನೀಡುತ್ತಾರೆ.
ಹೀಗೆ ಹಲವಾರು ವಂಚನೆಗಳ ಸೈಬರ್ ಅಪರಾಧಗಳು ನಡೆಯುವುದು ಇತ್ತೀಚೆಗೆ ಅತಿ ಹೆಚ್ಚಾಗಿ ಕಂಡುಬರುತ್ತದೆ. ಇವುಗಳ ರಕ್ಷಣೆಗಾಗಿ ಕೇಂದ್ರ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಧ್ಯಮ ಮತ್ತು ಟಿ ವಿಗಳ ಮುಖಾಂತರ ಜಾಹೀರಾತುಗಳನ್ನು ನೀಡಿ ಸಾರ್ವಜನಿಕರಿಗೆ ಎಚ್ಚರ ನೀಡುತ್ತಿರುವುದು ನಾವು ಕಾಣುತ್ತಿದ್ದೇವೆ.
ಅದರಲ್ಲಿ ನಾವು ಸೈಬರ್ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಪ್ಟವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ನವೀಕರಿಸುವುದು, ಆಂಟಿ ವೈರಸ್ ಸಾಫ್ಟ್ ವೇರ್ ಬಳಸಿ ನವೀಕರಿಸುವುದು, ಬಲವಾದ ಪಾಸ್ವರ್ಡ್ ಗಳನ್ನು ನಾವು ಬಳಸಬೇಕು, ಸ್ಪಾಮ್ ಈ ಮೇಲ್ ಗಳಲ್ಲಿ ಲಗತ್ತನ್ನು ಎಂದಿಗೂ ತೆರೆಯಬೇಡಿ. ವಿಶ್ವಾಸಾರ್ಹವಲ್ಲದ ವೆಬ್ಸೈಟ್ ಗಳಲ್ಲಿನ ಲಿಂಕ ಗಳನ್ನು ಕ್ಲಿಕ್ ಮಾಡಬೇಡಿ, ಸುರಕ್ಷಿತವಲ್ಲದ ಹೊರತು ವೈಯಕ್ತಿಕ ಮಾಹಿತಿ ನೀಡಬೇಡಿ,ಅನುಮಾನಾಸ್ಪದ ವಿನಂತಿಗಳ ಬಗ್ಗೆ ನೇರವಾಗಿ ಕಂಪೆನಿಗಳನ್ನು ಸಂಪರ್ಕಿಸಿ, ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ಗಳ ಮೇಲೆ ನಿಗಾ ಇರಿಸಿ.
ಹೀಗೆ ನಮ್ಮ ಧನ ಸುರಕ್ಷಿತವಾಗಿರಲು ನಾವು ಆರ್ಥಿಕ ಜಾಗೃತಾಗಲು ಎಚ್ಚರ ವಹಿಸುವುದು ಅತಿ ಅವಶ್ಯವಾಗಿದೆ ಎಂದು ಸಿಐಡಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ವಿ ಟಿ ರವರು ದೀರ್ಘವಾಗಿ ವಿಡಿಯೋ ಪವರ್ ಪಾಯಿಂಟ್ ಮುಖಾಂತರ ವಿವರವಾಗಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರುಗಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಕೆ. ಎಂ. ವೀರೇಂದ್ರ ಕುಮಾರ್ ರವರು ಜನ ಸುರಕ್ಷಾ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದರು
ಗಂಗಾವತಿ ಶಾಖೆಯ ಮ್ಯಾನೇಜರ್ ಬ್ರಹ್ಮದೇವ ಸಿಂಗ್ ರವರು ಎಸ್ ಬಿ ಐ ಶಾಖೆಯ ಠೇವಣಿ ಯೋಜನೆ, ಸಾಲ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು ಅಲ್ಲದೆ ಸರಕಾರದಿಂದ ದೊರೆಯುವ ಅನೇಕ ವಿವರಗಳನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರ ಗಳಿಗೆ ತಿಳಿಸಿದರು
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಮಮ್ತಾಜ್ ಬೇಗಂ ರವರು ಇಂದಿನ ದಿನಗಳಲ್ಲಿ ಅನೇಕರು ತಮ್ಮ ಬ್ಯಾಂಕ್ ಖಾತೆಯಲ್ಲಿಯ ಹಣಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನವಹಿಸುವುದು ಅತಿ ಅವಶ್ಯಕವಾಗಿದೆ , ಅನೇಕ ಸೈಬರ್ ವಂಚಕರು ಹಲವಾರು ರೀತಿಯಲ್ಲಿ ವಂಚನೆಯನ್ನು ಮಾಡಿ ನಮ್ಮ ಬ್ಯಾಂಕ್ ಖಾತೆಯಲ್ಲಿಯ ಹಣವನ್ನು ಕದಿಯುವ ಸಂಶಯವಿರುವುದರಿಂದ ನಾವು ಜಾಗೃತರಾಗುವುದು ಮತ್ತು ಅಪರಾಧ ತನಿಖಾ ವಿಭಾಗದವರು ತಿಳಿಸಿದಂತೆ ನಾವೆಲ್ಲರೂ ಜಾಗೃತರಾಗೋಣ ಎಂದು ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಕಿವಿ ಮಾತು ಹೇಳಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆಂಜನೇಯರವರು ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್ 2024 ರಿಂದ ಜನವರಿ 2025 ರ ವರೆಗೆ ಜನ ಸುರಕ್ಷಾ ಯೋಜನೆ ಮತ್ತು ಧನ ಸುರಕ್ಷಾ ಹಾಗೂ ಆರ್ಥಿಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಇದರಂಗವಾಗಿ ನಾವು ಈಗಾಗಲೇ ಅನೇಕ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸುರಕ್ಷಾ ಅಭಿಯಾನ ಹಮ್ಮಿಕೊಂಡು ಸಾಮಾಜಿಕ ಭದ್ರತಾ ಯೋಜನೆಗಳನ್ನು ಉಪಯೋಗಿಸಿಕೊಳ್ಳಲು ಎಲ್ಲರಿಗೂ ಮಾಹಿತಿ ನೀಡುವ ಅಭಿಯಾನ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುತ್ತೇವೆ ಎಂದು ಪ್ರಸ್ತಾವಿಕವಾಗಿ ಕಾರ್ಯಕ್ರಮದ ಕುರಿತು ಮಾತನಾಡಿದರು
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ. ಶಿವರಾಜ್ ಗುರಿಕಾರ್ ರವರು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಉತ್ತಮ ಮಾಹಿತಿ ನೀಡಿದ ಎಸ್. ಬಿ. ಐ. ಮತ್ತು ಅಪರಾಧ ತನಿಖಾ ದಳ ವಿಭಾಗಕ್ಕೆ ಧನ್ಯವಾದ ತಿಳಿಸಿದರು
ಪ್ರಾರಂಭದಲ್ಲಿ ಜಗದೇವಿ ಕಲಶೆಟ್ಟಿ ರವರು ಸ್ವಾಗತಿಸಿದರು.ಶ್ರೀ ಬಾರಿಕರ ಫಣಿರಾಜ್ ರವರು ಕಾರ್ಯಕ್ರಮ ನಿರೂಪಿಸಿದರ.
ಆರ್ಥಿಕ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳಾದ ದೊರೆ ಬಾಬು, ಭೂಮಿಕಾ, ಸುಮಲತಾ, ಸಲೀಂ, ಮಲ್ಲಿಕಾರ್ಜುನ್, ರಾಘವಮ್ಮ ,ಪಂಚಾಕ್ಷರಿ ,ಪವನ್ ಕುಮಾರ್ ಗುಂಡೂರ್ , ಶಾಹೀನ್ ಕೌಸರ್ ,ಲಕ್ಷ್ಮಿ ,ದೊಡ್ಡಬಸಮ್ಮ ಪರ್ವಿನ ಸುಲ್ತಾನ್ , ಗದ್ದಪ್ಪ , ಡಾ.ಮಂಜಣ್ಣ ,ಡಾ. ಪಾಗುಂಡಪ್ಪ ,ಡಾ. ಬಸವರಾಜ ಗೌಡನಬಾವಿ, ಡಾ.ಉಷಾರಾಣಿ, ಡಾ. ಶಿಲ್ಪ ,ಸುಧಾ ,ಸೈಫ್ ಆಫ್ರಿನಾ ಕೌಸರ್ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು



Comments
Post a Comment