ಕರ್ತವ್ಯಲೋಪ ಎಸಗಿದ ಜಿಲ್ಲಾ ದೇವದಾಸಿ ಪುನರ್ ವಸತಿ ಯೋಜನಾಧಿಕಾರಿಯನ್ನು ಅಮಾನತುಗೊಳಿಸುವ ಕುರಿತು,

 ಕರ್ತವ್ಯಲೋಪ ಎಸಗಿದ ಜಿಲ್ಲಾ ದೇವದಾಸಿ ಪುನರ್ ವಸತಿ ಯೋಜನಾಧಿಕಾರಿಯನ್ನು ಅಮಾನತುಗೊಳಿಸಲು ಕರ್ನಾಟಕ ಭೀಮಸೇನೆ ಸಮಿತಿ ಆಗ್ರಹ 

- ಜೂಡಿ ನ್ಯೂಸ್ 

 ಈ ಮೇಲೆ ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಮತಿ ಪೂರ್ಣಿಮಾ ಅಭಿವೃದ್ಧಿ ನಿರೀಕ್ಷಕರು ಹಾಗೂ ಯೋಜನಾಧಿಕಾರಿಗಳು ದೇವದಾಸಿ ಪುನರ್ವಸತಿ ಯೋಜನೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕೊಪ್ಪಳ ಕರ್ತವ್ಯಕ್ಕೆ ಹಾಜರಾಗಿದ್ದಾಗಿನಿಂದ ಇಲ್ಲಿಯವರೆಗೆ ದೇವದಾಸಿ ಪದ್ಧತಿ ನಿರ್ಮೂಲನೆ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಮಾಡದೆ ಕಾಟಾಚಾರಕ್ಕೆ ವರ್ಷಕ್ಕೆ ಒಂದು ಸಾರಿ ಮಾತ್ರ ಮಾಡುತ್ತಾ ಕೇಂದ್ರ ಕಚೇರಿಯಲ್ಲೆ ಕುಳಿತುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ,

 ದೇವದಾಸಿ ಆಚರಣೆ ಮುತ್ತು ಕಟ್ಟುವ ಪದ್ಧತಿಯ ಕೇಂದ್ರ ಸ್ಥಳವಾದ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆ ಮತ್ತು ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಲಕ್ಷಾಂತರ ಜನ ಸೇರುತ್ತಾರೆ. ಈ ಸಂದರ್ಭದಲ್ಲಿ ದೇವರ ಹೆಸರಿನಲ್ಲಿ ಮುತ್ತು ಕಟ್ಟಿ ದೇವದಾಸಿ ಮಾಡುವ ಸೂಕ್ಷ್ಮ ಪ್ರದೇಶದಲ್ಲಿ ಯೋಜನಾಧಿಕಾರಿಗಳು ಈ ದಿನಗಳಲ್ಲಿ ಯಾವುದೇ ಜಾಗೃತಿ ಕಾರ್ಯಕ್ರಮಗಳನ್ನು ಮಾಡದೆ, ಕರಪತ್ರ ಹಂಚುವುದಾಗಲಿ, ಬ್ಯಾನರ್,ಗೋಡೆ ಬರಹದ ಮೂಲಕವಾಗಲಿ, ಮಾಜಿ ದೇವದಾಸಿ ತಾಯಂದಿರು ಅವರ ಮಕ್ಕಳಿರುವ ಗ್ರಾಮಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಹಾಗೂ ದೇವದಾಸಿ ಪದ್ಧತಿಯ ಬಗ್ಗೆ ಗ್ರಾಮಗಳಿಗೆ ಹೋಗಿ ಜಾಗೃತಿ ಮಾಡುವಂತೆ ಸರ್ಕಾರ ವಾಹನಕ್ಕೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಅನುದಾನವನ್ನು ಮೀಸಲಿಟ್ಟರೂ ಸಹಿತ ಅನುದಾನವನ್ನು ಖರ್ಚು ಮಾಡದೆ ವಾಪಸ್ ಕಳಿಸಿದ್ದು ಮೊದಲನೇ ಕರ್ತವ್ಯಲೋಪ ವಾಗಿರುತ್ತದೆ.

 ಜಿಲ್ಲಾ ಕಚೇರಿಯಲ್ಲಿ ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಗೌರವಧನವನ್ನು ನೀಡುತ್ತಿರುವ ಸಂಸ್ಥೆಯೊಂದಿಗೆ ಹಣ ಪಡೆದು ತಮಗೆ ಪರಿಚಿತರೊಂದಿಗೆ ಶಾಮಿಲಾಗಿ ದಾಖಲೆ ನಿರ್ವಹಿಸುವ ಉದ್ದೇಶದಿಂದ ದರಪಟ್ಟಿ ಆಹ್ವಾನಿಸಿ, ವಾರ್ತಾ ಇಲಾಖೆಗೆ ಪ್ರಕಟಣೆ ನೀಡದೆ, ತಾಲೂಕ ಕಚೇರಿಯ ನೋಟಿಸ್ ಬೋರ್ಡಿನ ಸೂಚನಾ ಫಲಕಕ್ಕೆ ಅಂಟಿಸಿ ಇಲಾಖೆಯ ದೃಢೀಕರಣ ಪಡೆಯದೆ ನಿಯಮಬಾಹಿರವಾಗಿ ಅನರ್ಹ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಬೆಂಗಳೂರಿನ ಸಂಸ್ಥೆಗೆ ಆದೇಶ ನೀಡಿ ಭ್ರಷ್ಟಾಚಾರ ಮಾಡಿರುತ್ತಾರೆ.

 ಸದರಿಯವರು ದೈಹಿಕ ವಿಕಲಚೇತನರಾಗಿರುವುದರಿಂದ ಅನಿಷ್ಟ ಪದ್ದತಿಯು ವಿರುದ್ಧ ಕರ್ತವ್ಯ ನಿರ್ವಹಿಸಲು ಕ್ಷೇತ್ರದ ಮಟ್ಟದಲ್ಲಿ ಓಡಾಡಿ ಜಾಗೃತಿ ಮೂಡಿಸಿ ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು ಇವರ ನಿರ್ಲಕ್ಷತೆಯಿಂದ ಕುಮಾರಿ ಲತಾ ತಂದೆ ಮೇಘರಾಜ ಸಾ. ಅಗಳಕೇರಿ ಎನ್ನುವ ಹದಿನೈದು ವರ್ಷ ಬಾಲಕಿಯು ಮುತ್ತು ಕಟ್ಟಿಕೊಂಡು ದೇವರ ಹೆಸರಿನಲ್ಲಿ ದೇವಸ್ಥಾನದಲ್ಲಿ ಸುತ್ತಾಡುತ್ತಿದ್ದರು ಸಹಿತ ಬಾಲಕಿಯನ್ನು ಗುರುತಿಸಿ ದೇವಸಿಯನ್ನಾಗಿ ಮಾಡಿ ಮುತ್ತು ಕಟ್ಟಿದವರಾಗಲಿ ಅದಕ್ಕೆ ಪ್ರಚೋದನೆ ನೀಡಿದವರ ಮೇಲಾಗಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ವಿಫಲರಾದ ಸದರಿಯವರನ್ನು ಕೂಡಲೇ ತುರ್ತು ಅಮಾನತು ಗೊಳಿಸಬೇಕೆಂದು ಕರ್ನಾಟಕ ಭೀಮಸೇನೆ ಸಮಿತಿ  ದಾಖಲೆಗಳ ಸಮೇತ ಡಿಸಿಯವರಿಗೆ ದೂರು ಸಲ್ಲಿಸಿದ್ದಾರೆ.

Comments