ಎಚ್ ಸೌಭಾಗ್ಯ ಲಕ್ಷ್ಮಿ ಅವರಿಂದ ಪವಾಡ ಬಯಲು ಕಾರ್ಯಕ್ರಮ ಯಶಸ್ವಿ
ದೇವರು ಧರ್ಮದ ಹೆಸರಿನಲ್ಲಿ ಮೂಲಭೂತ ವಾದಿಗಳು.. ಅಂಧಕಾರ ಅಜ್ಞಾನ ಮೌಢ್ಯ ಬಿತ್ತುವಲ್ಲಿ.. ಪವಾಡಗಳನ್ನು ಮಾಡುವಲ್ಲಿ ಅತ್ಯಂತ ನಿಶೀಮರಾಗಿದ್ದಾರೆ.. ಆದ್ದರಿಂದ ಇಂಥವುಗಳಿರುದ್ದ ವಿದ್ಯಾರ್ಥಿ ಸಮೂಹ ಸದಾಾವಕಾಲ ಜಾಗೃತರಾಗಿ ವೈಚಾರಿಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ವಿಜಯನಗರ ಜಿಲ್ಲಾ ಸಂಚಾಲಕರಾದ ಎಚ್ ಸೌಭಾಗ್ಯ ಲಕ್ಷ್ಮಿ ಹೇಳಿದರು.
ಪಟ್ಟಣದ ಚಿತ್ತವಾಡಿಗೆಯ ಪ್ರೌಢಶಾಲಾ ವಿಭಾಗದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಮತ್ತು ಸುಭಾಷ್ ಚಂದ್ರ ಬೋಸ್ ಇಕೋ ಕ್ಲಬ್ ಆಶ್ರಯದಲ್ಲಿ ಪವಾಡು ಬಯಲು ಕಾರ್ಯಕ್ರಮ ಹಲವಾರು ಪವಾಡಗಳನ್ನು ತೋರಿಸಿ ವೈಜ್ಞಾನಿಕ ಸತ್ಯಗಳನ್ನು ವಿದ್ಯಾರ್ಥಿಗೆ ವಿವರಿಸಿದರು..
ನಮ್ಮ ಕರ್ನಾಟಕದಲ್ಲಿ ಖ್ಯಾತ ವೈಚಾರಿಕ ಚಿಂತಕರಾಗಿದ್ದ ಎಚ್ ನರಸಿಂಹಯ್ಯ ರವರು ಇಂತಹ ಪವಾಡbಮಾಡುವ ಬಾಬಗಳ ವಿರುದ್ಧ ಹಲವಾರು ಸವಾಲುಡ್ಡಿ.. ಅವರ ಮೋಸದ ಜಾಲವನ್ನು ಸಮಾಜ ಮುಂದೇ ತೆರೆದರು... ಪ್ರಾರಂಭದಲ್ಲಿ ಕಾಯಿ ಒಡೆಯುವ ಮೂಲಕ ಕಾಯಲ್ಲಿ ಕಾಯಿಯಲ್ಲಿ ಹೇಗೆ ಹೂಗಳು ಬರುತ್ತವೆ ಇದರಿಂದ ಜನರನ್ನು ಹೇಗೆ ಮೋಸ ಮಾಡುತ್ತಾರೆ ಇದರ ಹಿಂದಿನ ಗುಟ್ಟ ಕಾಯೊಳಗೆ ಒಂದು ಕಣ್ಣನ್ನು ತೆರೆದು ಅದರೊಳಗೆ ಮುಂಚಿತವಾಗಿ ಮುಗ್ಗು ಹೂಗಳನ್ನು ಹಾಕಿ ಕಾಯಿಯನ್ನು ತಯಾರು ಮಾಡುತ್ತಾರೆ ಎಂದು ಅದರ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಇದರ ಹಿಂದಿರುವ ಸತ್ಯವನ್ನು ತಿಳಿಸಿದರು...
ವಿದ್ಯಾರ್ಥಿಗಳಿಂದ ನೀರಿನಲ್ಲಿ ದೀಪವನ್ನು ಹಚ್ಚುವ ಮೂಲಕ ವಿದ್ಯಾರ್ಥಿಗಳನ್ನು ಮೂಕಸ್ಮಿತರನ್ನಾಗಿ ಮಾಡಿದರು.. ಪವಾಡ ಮಾಡುವವರು ಪ್ರಾರಂಭದಲ್ಲಿ ಭತ್ತಿಗೆ ತುಪ್ಪ ಮೇಣದ ಬತ್ತಿಯ ಅಂಶವನ್ನು ಸವರಿ ದಪ್ಪದಾದ ಭತ್ತಿ ತಯಾರು ಮಾಡಿರುತ್ತಾರೆ... ನಂತರ ದೀಪದಲ್ಲಿ ದಪ್ಪದಾದ ಬತ್ತಿಯನ್ನು ಇಟ್ಟು ದೀಪವನ್ನು ಹಚ್ಚುತ್ತಾರೆ.. ಇದರ ಹಿಂದಿನ ಮರ್ಮ ಈ ರೀತಿಯಲ್ಲಿ ಇರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು...
ಕೈಯಲ್ಲಿ ಕರ್ಪೂರ ಹಚ್ಚಿಕೊಳ್ಳುವುದು, ನಾಲಗೆ ಮೇಲೆ ಕರ್ಪೂರವನ್ನು ಹಚ್ಚಿಕೊಳ್ಳುವುದು, ಹಾಗೆಯೇ ಮೈ ಮೇಲೆ ಬೆಂಕಿಯನ್ನು ಸವರಿಕೊಳ್ಳುವುದು... ಇವೆಲ್ಲವೂ ಪವಾಡವಲ್ಲ ಇದರ ಹಿಂದೆ ವೈಜ್ಞಾನಿಕ ನಿಯಮಗಳಿವೆ... ಬೆಂಕಿಯು ಮೇಲ್ಮುಖವಾಗಿ ಉರಿಯುತ್ತದೆ... ಇದನ್ನು ಬಳಸಿಕೊಂಡು ಮೈ ಮೇಲೆ ಬೆಂಕಿಯನ್ನು ಸವರಿ ಕೊಳ್ಳುತ್ತಾರೆ ಆದ್ದರಿಂದ ಅವರಿಗೆ ಏನು ಆಗುವುದಿಲ್ಲ ಇದರ ಹಿಂದಿರುವ ವೈಜ್ಞಾನಿಕ ನಿಯಮಗಳನ್ನು ತಿಳಿದುಕೊಂಡು ಇಂತಹ ಪವಾಡ ಅಂದಕಾರ ಮೂಡ್ಯವನ್ನು ಯಾರು ನಂಬಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಂತರ ವಿದ್ಯಾರ್ಥಿಯ ಕಣ್ಣಿನ ಮೂಲಕ ಯಾವುದೇ ಬೆಂಕಿ ಪಟ್ಟಣ ಇಲ್ಲದೆ ತಟ್ಟಿಯಲ್ಲಿ ಬೆಂಕಿಯನ್ನು ತರಿಸಿ ವಿದ್ಯಾರ್ಥಿಗಳನ್ನು ಚಕಿತರನ್ನಾಗಿ ಮಾಡಿದರು ಇದರ ಹಿಂದಿರುವ ವೈಜ್ಞಾನಿಕ ಸತ್ಯ ಎಂದರೆ ತಟ್ಟೆಯೊಳಗೆ ಪೋಟಸಿಯಂ ಮತ್ತು ಸೇರಿಸಲಾಗುತ್ತದೆ ನಂತರ ಅದಕ್ಕೆ ಜೇನುತುಪ್ಪವನ್ನು ಹಾಕಿದರೆ ಬೆಂಕಿ ಒತ್ತಿಕೊಳ್ಳುತ್ತದೆ.. ಇದನ್ನು ಬಳಸಿಕೊಂಡು ಕೆಲವರು ಮಾಟ ಮಂತ್ರ ಬಾನಮತಿ ಮಾಡುತ್ತಾರೆ ಆದ್ದರಿಂದ ಇಂತಹ ಸತ್ಯವನ್ನು ಅರಿತು ಮಾಟ ಮಂತ್ರ ಬಾನುಮತಿಯನ್ನು ಯಾರು ನಂಬಬಾರದು ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು.
ಹಾಗೆಯೇ ಕಬ್ಬಿಣದ ಹಾವಿಗೆ ಹಾವಿಗೆಯ ಮೇಲೆ ನಿಂತು ವಿದ್ಯಾರ್ಥಿಗಳಿಗೆ ಅದರ ಹಿಂದಿರುವ ಮರ್ಮವನ್ನು ತಿಳಿಸಿದರು, ಹಾಗೂ ಒಂದು ಚೊಂಬಿನಲ್ಲಿ ಅಕ್ಕಿಯನ್ನು ಹಾಕಿ ಅದರೊಳಗೆ ಚಾಕುವನ್ನು ಸಿಕ್ಕಿಸಿ ಯಾವುದೇ ಸಹಾಯವಿಲ್ಲದೆ ಸಾಕುವಿನ ಮೂಲಕ ಚೊಂಬನ್ನು ಎತ್ತಿದರು.. ಇಲ್ಲಿರುವ ವೈಜ್ಞಾನಿಕ ಸತ್ಯ ಎಂದರೆ ಚೊಂಬಿನೊಳಗೆ ಅಕ್ಕಿಯ ಸಾಂದ್ರತೆ ಹೆಚ್ಚಾಗದಂತೆ ಅದರೋಳಗೆ ಹಾಕುವ ವಸ್ತುವು ಬಿಗಿಯಾಗಿ ಮಾರ್ಪಟ್ಟಾಗುತ್ತದೆ.. ಅದರ ಹಿಂದಿರುವ ವೈಜ್ಞಾನಿಕ ನಿಯಮವನ್ನು ತಿಳಿಸಿದರು...
ಹೀಗೆ ಕೆಂಡ ಹಾಯುವುದು, ಎಣ್ಣೆಯಲ್ಲಿ ಕೈಯದ್ದು, ಕೈಯಲ್ಲಿ ಬೂದಿ ತರಿಸುವುದು, ಕೈಯಲ್ಲಿ ವಸ್ತುಗಳನ್ನು ಸೃಷ್ಟಿಸುವುದು, ಹೀಗೆ ಹಲವಾರು ಚಮತ್ಕಾರಗಳು .. ಹಲವಾರು ಪವಾಡುಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಮೂಡಿಸಿದರು.. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ B,V,ಶ್ರೀಧರ, ಲೀಲಾ ಮೂರ್ತಿ ಸರ್, ಸುಭಾಸ್ ಚಂದ್ರ ಬೋಸ್ ಇಕೋ ಕ್ಲಬ್ಬಿನ ವಿದ್ಯಾರ್ಥಿ ಮಾರ್ಗದರ್ಶಕರಾದ ಇಂದ್ರಾ ಮೇಡಂ,ವರಲಕ್ಷ್ಮಿ,ವಸುಧಾ, ಕುಸುಮ, ನಾರಾಯಣಮ್ಮ.. ಇತರೆ ಶಿಕ್ಷಕರು ಭಾಗವಹಿಸಿದ್ದರು.. B,ED, ನಾಗರಾಜ್ ಘಂಟಿ, ಮತ್ತು ಸಿ ಶಿವಕುಮಾರ್ ಪವಾಡ ಬಯಲು ಕಾರ್ಯಕ್ರಮಕ್ಕೆ ಸಹಕರಿಸಿದರು...



Comments
Post a Comment