ಯುವ ನಾಯಕ ಅಶೋಕ್ ಬಿ.ನಾಯ್ಕ ಹುಟ್ಟುಹಬ್ಬ: 90ಕ್ಕೂ ಹೆಚ್ಚು ಯುವಕರಿಂದ ರಕ್ತದಾನ

ಜೂಡಿ ನ್ಯೂಸ್ :

ಗರಿಬೊಮ್ಮನಹಳ್ಳಿ : ಯುವ ನಾಯಕ ಅಶೋಕ್ ಬಿ. ನಾಯ್ಕ ರವರ 26ನೇ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರ ಹಾಗೂ ರೋಗಿಗಳಿಗೆ ಹಣು ಹಂಪಲು ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. 

ಕೆಎಂಎಫ್‌ನ ಅಧ್ಯಕ್ಷರು, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಎಸ್.ಭೀಮಾನಾಯ್ಕ ರವರ ಪುತ್ರ ಹಾಗೂ ಕಾಂಗ್ರೆಸ್ ಯುವ ಮುಖಂಡರೂ ಆಗಿರುವ ಆಶೋಕ್ ಬಿ.ನಾಯ್ಕ ರವರ 26ನೇ ವರ್ಷದ ಹುಟ್ಟು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ 90ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಾಲು ವಿತರಿಸಲಾಯಿತು. 



 ಈ ಸಂದರ್ಭದಲ್ಲಿ ದೇವ ನಾಯಕ ಅಶೋಕ್ ನಾಯ್ಕ ಅವರ ಅಭಿಮಾನಿಗಳು, ಕಾಂಗ್ರೆಸ್ ಯುವ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Comments