Judi News

ತಮ್ಮ ವಾರ್ಡ್ ಗೆ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ಆರೋಪ 

ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ

ಕೊಪ್ಪಳ,: ತಮ್ಮ ವಾರ್ಡ್ ಗೆ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ನಗರಸಭೆ 16ನೇ ವಾರ್ಡ್ ಸದಸ್ಯ ಸೋಮಣ್ಣ ಹಳ್ಳಿ ತಲೆ ಮೇಲೆ ಕಲ್ಲು ಹೊತ್ತು ವಿನೂತನವಾಗಿ ಪ್ರತಿಭಟಿಸಿದರು.

16ನೇ ವಾರ್ಡ್ ಗೆ ಮೂಲ ಸೌಕರ್ಯಗಳಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಅಧ್ಯಕ್ಷ, ಪೌರಾಯುಕ್ತ ಹಾಗೂ ಜಿಲ್ಲಾಧಿಕಾರಿ ಅವರಿಗೂ ಮನವಿ ಕೊಟ್ಟಿದ್ದೇನೆ. ಶೌಚಾಲಯ, ಪಾರ್ಕ್ ಯಾವುದೂ ಮಾಡುತ್ತಿಲ್ಲ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ಸಾಕಾಗಿದೆ ಎಂದು ಆರೋಪಿಸಿದರು.

 ನಗರಸಭೆ ಅಧ್ಯಕ್ಷ ಅಮ್ಮದ್‌ ಪಟೇಲ್‌, ಇತರ ಕಾಂಗ್ರೆಸ್‌ ಸದಸ್ಯರು ಮನವೊಲಿಕೆಗೆ ಯತ್ನಿಸಿದರೂ ಸೋಮಣ್ಣ ಹಠ ಬಿಡಲಿಲ್ಲ. ನಗರಠಾಣೆ ಪಿಐ ಜಯಪ್ರಕಾಶ ಹಾಗೂ ಪೊಲೀಸರು ಮನವಿ ನೀಡಿ. ಆದರೆ ಸಾರ್ವಜನಿಕರಿಗೆ ತೊಂದರೆ ಆಗಲು ಬಿಡುವುದಿಲ್ಲ ಎಂದರು. 

ಈ ವೇಳೆ ಪರಸ್ಪರ ವಾಗ್ವಾದ ನಡೆದು ಹೈ ಡ್ರಾಮಾ ನಡೆಯಿತು.


ಕಲ್ಲಿಗೆ ನಾಮ ಹಾಕಿ ಸೈಜ್ ಕಲ್ಲು ಹೊತ್ತು ಬಂದ ಸೋಮಣ್ಣ ಅದಕ್ಕೆ ತಿರುಪತಿ ನಾಮ ಹಾಕಿ ಪ್ರದರ್ಶಿಸಿದರು. ನಾಮ ಹಾಕಿದ ಕಲ್ಲಿಗೆ ಬೆಲೆ ಇದೆ. ನಮ್ಮ ಮನವಿಗೆ ಬೆಲೆ ಇಲ್ಲ ಎಂದು ತಲೆ ಮೇಲೆ ಕಲ್ಲು ಹೊತ್ತು ಪ್ರದರ್ಶಿಸಿದರು.

Comments