Judi News-

ಚಿತ್ತವಾಡಿಗಿ ರೈಲ್ವೇ ಎಲ್.ಸಿ.ಗೇಟ್ 5, ಗಂಟೆಗಟ್ಟಲೆ ಬಂದ್ : ಕೂಡಲೇ ಕ್ರಮ ಕೈಗೊಳ್ಳುವಂತೆ ರೈಲ್ವೇ ಸಚಿವರಿಗೆ ಶಾಸಕರ ಮನವಿ 

ಹೊಸಪೇಟೆ : ಚಿತ್ತವಾಡಗಿಯ ರೈಲ್ವೆ ಎಲ್.ಸಿ.ಗೇಟ್ ನಂಬರ್ 5 - ಸುಮಾರು ಎರಡು ಗಂಟೆಗಳ ಕಾಲ ಮುಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಎಚ್.ಆರ್.ಗವಿಯಪ್ಪ ಕೇಂದ್ರ ರೈಲ್ವೇ ಸಚಿವರಿಗೆ, ರಾಜ್ಯ ಖಾತೆ ಸಚಿವರಿಗೆ ಹಾಗು ನೈರುತ್ಯ ರೈಲ್ವೇ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಹೊಸಪೇಟೆಯ ಚಿತ್ತವಾಡಿಗಿಯ ಸಾಯಿ ಕಾಲೋನಿ ಹತ್ತಿರದ ರೈಲ್ವೆ ಗೇಟ್ನಿಂದ (LC gate no 5 HPT-VYS km 2/00 PN gate ) ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಕಾರಣ ಶಾಸಕ ಹೆಚ್. ಆರ್. ಗವಿಯಪ್ಪರವರು ರೈಲ್ವೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರವರಿಗೆ, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ರವರಿಗೆ ಹಾಗೂ ಸಂಬಂಧಿಸಿದ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಹಾಗೂ ಎಕ್ಸ್ ಖಾತೆಯ ಮೂಲಕ ಸಾರ್ವಜನಿಕರ ತೊಂದರೆಯ ವಿಡಿಯೋಗಳನ್ನು ಹಂಚಿಕೊಂಡು ತಕ್ಷಣ ಸಾರ್ವಜನಿಕರ ತೊಂದರೆಯನ್ನು ಸರಿಪಡಿಸಲು, ಸದರಿ LC gate no 5 HPT-VYS km 2/00 PN gate ಅನ್ನು ಸ್ಪೆಷಲ್ ಗೇಟ್ ಅಥವಾ ಇಂಟರ್ಲಾಕಿಂಗ್ ಸಿಸ್ಟಮ್ or ಓಪನ್ ಗೇಟ್ ಫಾರ್ ರೋಡ್ ಟ್ರಾಫಿಕ್ ಅನ್ನಾಗಿ ಪರಿವರ್ತಿಸಲು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಗವಿಯಪ್ಪ, ಕೇಂದ್ರ ರೈಲ್ವೇ ಸಚಿವ, ರಾಜ್ಯ ಖಾತೆ ಸಚಿವರನ್ನು ಇನ್ನೂ ಭೇಟಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಸದ್ಯ ನೈರುತ್ಯ ರೈಲ್ವೇ ಅಧಿಕಾರಿಗಳು ಹುಬ್ಬಳ್ಳಿ, ಇವರೊಂದಿಗೆ ಮಾತನಾಡಿದ್ದೇನೆ. ಚಿತ್ತವಾಡಿಗಿ ರೈಲ್ವೇ ಗೇಟ್ 2 ತಾಸು ಮುಂಚೆ ಹಾಕುವುದರಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಮನವರಿಕೆ ಮಾಡಿದ್ದೇನೆ. ಅವರು ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

Comments