ಅಕ್ಷರ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ  

Judi News:

ಗಂಗಾವತಿ : ಪ್ರತಿಷ್ಠಿತ ವಿದ್ಯಾ ಸಂಸ್ಥೆ ಅಕ್ಷರ ಪಬ್ಲಿಕ್ ಶಾಲೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮೂರು ದಿನ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನ ಜರಗಿತು.

ಸಂಸ್ಥೆಯ ಅಧ್ಯಕ್ಷ ರವಿ ಚೈತನ್ಯ ರೆಡ್ಡಿ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಹೊಸದನ್ನು ಹುಡುಕಲು ಪ್ರಯತ್ನಿಸಬೇಕು,

ವಿಜ್ಞಾನವು ಜೀವನದ ಎಲ್ಲ ರಂಗಗಳಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಹೊಸ ಆಲೋಚನೆ ಹಾಗೂ ಅನ್ವೇಷಣಾ ಮನೋಭಾವ ಬೆಳೆಯಲು ವಿಜ್ಞಾನ ವಸ್ತು ಪ್ರದರ್ಶನ ಅವಶ್ಯಕ.ಮಕ್ಕಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದುವ ಮೂಲಕ ಹೊಸ ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು,ವಿದ್ಯಾರ್ಥಿಗಳು ಸೃಜನಶೀಲತೆ ಬೆಳೆಸಿಕೊಳ್ಳಬೇಕು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಹೀಗಾದಾಗ ವ್ಯಕ್ತಿ ವಿಕಾಸವಾಗುತ್ತದೆ,ವಸ್ತು ಪ್ರದರ್ಶನಗಳು ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತವೆ ಎಂದು ತಿಳಿಸಿದರು.

ನಂತರ ಮುಖ್ಯೋಪಾಧ್ಯಾಯನಿ ಹೇಮಾರೆಡ್ಡಿ ಮಾತನಾಡಿ ಗುರುವಾರದಿಂದ ಶನಿವಾರದವರೆಗೂ ಮೂರು ದಿನ ಈ ವಸ್ತು ಪ್ರದರ್ಶನ ಆಯೋಜಿಸಿದ್ದೇವೆ,ಸುಮಾರು 60 ಮಳಿಗೆಗಳಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಹದಿನೈದು ನೂರಕ್ಕೂ ಹೆಚ್ಚು ವಿಜ್ಞಾನ ಮತ್ತು ವಸ್ತು ಕಲಾ ಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ, ಪಾಲಕರು ವಿದ್ಯಾರ್ಥಿಗಳು ಶಿಕ್ಷಕ ವೃಂದ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ವಿದ್ಯಾರ್ಥಿಗಳು ತಯಾರಿಸಿದ ವಸ್ತು ಕಲಾಕೃತಿಗಳು ನೋಡುಗರ ಮನಸೆಳೆಯುವಂತಿದ್ದವು,ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತೇಜಸ್ವಿ, ಗೌರಿ, ಪಾರ್ವತಿ, ಪುಷ್ಪ, ಅನುಪಮ, ರೇಷ್ಮಾ, ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


Comments