ಜಿ. ಶ್ರೀನಿವಾಸ್ ಶೆಟ್ಟಿ ಅವರಿಗೆ 'ಛಾಯಶ್ರೀ " ಪ್ರಶಸ್ತಿಯ ಗರಿ

ಕರ್ನಾಟಕ "ರಾಜ್ಯ ಮಟ್ಟದ ಛಾಯಾಶ್ರೀ" ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ್ ಆಯ್ಕೆ..


ಜೂಡಿ ನ್ಯೂಸ್ :

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ದಿವಂಗತ ಜಿ ರಾಮಣ್ಣ ದಿವಂಗತ ಜಿ ಹನುಮಕ್ಕನವರ ಸುಪುತ್ರರಾದ ಶ್ರೀನಿವಾಸ್ ರವರು ರಾಜ್ಯಮಟ್ಟದ ಛಾಯಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕು ಛಾಯಾಗ್ರಾಹಕರ ಸಂಘ(ರಿ).
"ಕರ್ನಾಟಕ ರಾಜ್ಯ
 ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು" ಇವರು ನೀಡುವ ಪ್ರಶಸ್ತಿಯನ್ನು ಬೆಂಗಳೂರಿನ ಡಿಜಿ ಇಮೇಜಿನ ವಸ್ತು ಪ್ರದರ್ಶನದಲ್ಲಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಇದೇ ತಿಂಗಳು11,12,13 ನೇ ಏಪ್ರಿಲ್ ತಿಂಗಳಲ್ಲಿ ನಡೆಯುವ "ಛಾಯಾಗ್ರಾಹಕರ ಹಬ್ಬ 2025." ಪ್ರತಿ ವರ್ಷ ನೀಡುವ "ಛಾಯಾಶ್ರೀ" ಪ್ರಶಸ್ತಿಯನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ "ಹಂಪಾಪಟ್ಟಣ ಗ್ರಾಮದ ಜಿ ಶ್ರೀನಿವಾಸ ಶೆಟ್ಟಿ" ಇವರು ರಾಜ್ಯಮಟ್ಟದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಹಗರಿಬೊಮ್ಮನಹಳ್ಳಿಯ ಫೋಟೋ ಅಸೋಸಿಯೇಷನ್ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....

ಹಂಪಾಪಟ್ಟಣ ಗ್ರಾಮದವರಾದ ಶ್ರೀನಿವಾಸ್ ರವರು 1996 ರಿಂದಲೇ ಉತ್ತಮ ಛಾಯಾಚಿತ್ರಗಾರರಾಗಿ ಸಮಾಜದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ... ಶ್ರೀಯುತರು ಸಮಾಜದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದು ಇವರ ಸಾಮಾಜಿಕ ಸೇವೆ ಕೆಳಗಿನಂತಿವೆ 2018ರಲ್ಲಿ ಹಂಪಾಪಟ್ಟಣ ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಕಾರ್ಯದರ್ಶಿಯಾಗಿ,
ಕರ್ನಾಟಕ ಆರ್ಯವೈಶ್ಯ ಮಹಾಸಭಾ (ರಿ) ಬೆಂಗಳೂರು. ಇದರಲ್ಲಿ ವಿಜಯನಗರ ಜಿಲ್ಲಾ ಸಮಿತಿಯ ನಿರ್ದೇಶಕರಾಗಿ.
2023 ಜನವರಿಯಲ್ಲಿ ಶ್ರೀ ಮಾತಾ ಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾಗಿ ಹಾಗೂ 2024ನೇ ಡಿಸೆಂಬರ್ ನಲ್ಲಿ ಹಂಪಾಪಟ್ಟಣದಲ್ಲಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನ ನಿರ್ದೇಶಕನಾಗಿ ಪ್ರಸ್ತುತ ದಿನಮಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಿ ಶ್ರೀನಿವಾಸ್ ರವರು ಜನಸೇವೆ ಜನಾರ್ದನ ಸೇವೆ ಎಂದು ಕಂಕಣತೊಟ್ಟು.. ಸಮಾಜಕ್ಕೆ ನನ್ನಿಂದ ಏನಾದರೂ ಸೇವೆ ನೀಡಲೇಬೇಕೆಂದು ಹೃದಯದಲ್ಲಿ ಸಂಕಲ್ಪ ಮಾಡಿ 2023 ಜನವರಿ 24 ತಾರೀಖಿನ ದಿನಾಂಕದಂದು ತಾಯಿಯ ಸವಿ ನೆನಪಿಗಾಗಿ ಮಾತಾ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಿಕೊಂಡು ಸಮಾಜದಲ್ಲಿ ವಿಶೇಷ ಸೇವೆಗೈದ ಸಮಾಜ ಸೇವಕರು, ಯೋಧರು ಆರಕ್ಷಕರು, ಮಹಿಳಾ ಸಾಧಕಿಯರು, ರೈತರು, ಅರಣ್ಯ ನೌಕರರು, ಸರ್ವ ಸಮಾಜದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವ ಸಲ್ಲಿಸಿದ್ದಾರೆ, ವಿಶೇಷವಾಗಿ ತಮ್ಮ ಟ್ರಸ್ಟಿನ ವತಿಯಿಂದ ಉಚಿತ ಕಣ್ಣಿನ ತಪಾಸಣೆಯ ಮೂಲಕ 74 ಹಿರಿಯ ಜೀವಿಗಳಿಗೆ ಕಣ್ಣಿನ ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ 74 ಹಿರಿಯ ಜೀವಿಗಳಿಗೆ ಬೆಳಕಾಗಿದ್ದಾರೆ, ಸಮಾಜಕ್ಕೆ ವಿಶೇಷವಾಗಿ ಸೇವೆ ಸಲ್ಲಿಸಿದ ಪೌರಕಾರ್ಮಿಕರಿಗೆ, ಚಿತ್ರ ಕಲಾವಿದರಿಗೆ, KPTCL ನೌಕರರಿಗೆ... ಹಾಗೆ ಗ್ರಾಮದಲ್ಲಿ ನೀರಿನ ಅರವಟ್ಟಿಗೆ ಸ್ಥಾಪನೆ. ಆಶಾ ಕಾರ್ಯಕರ್ತರಿಗೆ ದವಸ ಧಾನ್ಯ ನೀಡಿ ಗೌರವ ನೀಡುವುದು... ತಮ್ಮ ಮೆಡಿಕಲ್ ಶಾಪ್ ಮೂಲಕ ಕೊಟ್ಟೂರೇಶ್ವರ ರಥೋತ್ಸವ ಸಂದರ್ಭದಲ್ಲಿ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ಸೇವೆ ಉಚಿತ ಮಾತ್ರೆಗಳ ನೀಡುವ ಮೂಲಕ ಯಾತ್ರಿಗಳ ಆರೋಗ್ಯ ಕಾಪಾಡುವಲ್ಲಿ ಮುಖ್ಯವಾದ ಪಾತ್ರ ವಹಿಸಿದ್ದಾರೆ,ಹೀಗೆ ತಮ್ಮ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು.... ಇಂತಹ ಸಂದರ್ಭದಲ್ಲಿ ಶ್ರೀಯುತರಿಗೆ ರಾಜ್ಯಮಟ್ಟದ ಛಾಯಾಶ್ರೀ ಪ್ರಶಸ್ತಿ ಲಭಿಸಿರುವುದು ಸರ್ವರಿಗೂ ಹೆಮ್ಮೆಯ ವಿಷಯವಾಗಿದೆ... ಹೀಗೆ ಶ್ರೀಯುತರಿಗೆ ರಾಜ್ಯಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬರಲಿ... ಇವರ ಸಾಮಾಜಿಕ ಸೇವೆ ಹೀಗೆ ನಿರಂತರವಾಗಿರಲಿ ಎಂದು ಹಿತೈಷಿಗಳು ಶುಭ ಹಾರೈಸಿದ್ದಾರೆ. ..

Comments