ಜೂಡಿ ನ್ಯೂಸ್ :
500 ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಮಾದೂರು ಹನುಮಮ್ಮ
ಹಂಪಾಪಟ್ಟಣ : ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಮೊದಲಿಗೆ ನೆನಪಿಗೆ ಬರುತ್ತಿದ್ದುದ್ದೇ ಸೂಲಗಿತ್ತಿಯರು. ಅದೇ ರೀತಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಸೂಲಗಿತ್ತಿ ಮಾದೂರು ಹನುಮಮ್ಮ (85) ವರ್ಷದ ಯಶಸ್ವಿ ಸೂಲಗಿತ್ತಿ ಎಂದೇ ಖ್ಯಾತಿ ಪಡೆದಿದ್ದಾರೆ...
ಓದು ಬರಹ ಗೊತ್ತಿಲಗಲದ ಹನುಮಮ್ಮಳನ್ನು ಎಷ್ಟು ಹೆರಿಗೆ ಮಾಡಿಸಿದ್ದೀಯಿ ಎಂದು ಕೇಳಿದರೆ ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲಪ್ಪಾ, ಅಂದಾಜು 600ಕ್ಕೂ ಹೆಚ್ಚು ಹೆರಿಗೆ ಮಾಡಿಸರಬಹುದು ಎಂದು ಮುಸುನಗುತ್ತಾ ಹೇಳುತ್ತಾಳೆ.
ಹೌದು ಹನುಮಮ್ಮನವರ ಸೂಲಗಿತ್ತಿ ಸೇವೆ ಗ್ರಾಮದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಸಹ ಅವರ ಸೇವೆ ಖ್ಯಾತಿ ಪಡೆದಿದೆ.. ಊರುಗಳಿಂದ ಜನರು ಬಂದು ಹೆರಿಗೆ ಮಾಡಿಸಲು ಕರೆದುಕೊಂಡು ಹೋಗುತ್ತಾರೆ. ಗ್ರಾಮದ ಬಹುತೇಕ ಹೆರಿಗೆಗಳನ್ನು ಹನುಮಮ್ಮ ಯಾವುದೇ ಸಮಸ್ಯೆಗೆ ಆಸ್ಪದ ನೀಡದೇ ಆರೋಗ್ಯಕರ ಹೆರಿಗೆ ಮಾಡಿಸಿದ್ದಾಳೆ. ಸೂಲುಗಿತ್ತಿ ಸೇವೆಯ ಜೊತೆಗಿಯು ಹೆರಿಗೆಯಾದ ಮಕ್ಕಳ ಆರೈಕೆ ಪೂರೈಕೆಯು ಸಹ ಮಾಡುತ್ತಾರೆ, ಹಾಗೆ ನವಜಾತ ಶಿಶುವಿಗೆ, ಹಾಗೆ ಹೆರಿಗೆಯಾದ ಹೆಣ್ಣು ಮಗುವಿಗೆ ಆರೋಗ್ಯಕರವಾದ ಮಾಹಿತಿ, ಸಾಂತ್ವಾನ ಆರೈಕೆ ಮಾಡುವ ಮೂಲಕ, ಎಷ್ಟು ಹೆಣ್ಣು ಮಕ್ಕಳ , ನವಜಾತ ಶಿಶುಗಳ ಜೀವವನ್ನು ಕಾಪಾಡಿದ್ದಾರೆ,
ಪ್ರಸ್ತುತ ದಿನಗಳಲ್ಲಿ ಹೆರಿಗೆ ಸಂದರ್ಭವೆಂದರೆ ಇಡೀ ಕುಟುಂಬ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ಬಹುತೇಕ ಸಿಜೇರಿಯನ್ ಮಾಡಿಸುವುದು ವೈದ್ಯರ ರೂಢಿಯಾಗಿದೆ. ಇಂತಹ ಕಾಲಘಟ್ಟದಲ್ಲಿ ಸೂಲಗಿತ್ತಿ ಹನುಮಮ್ಮ ಅವರನ್ನು ಎಲ್ಲಾ ತಾಯಂದಿರು ಸದಾಕಾಲ ನೆನೆಯುತ್ತಿರುತ್ತಾರೆ.
ಮುಖ್ಯವಾಗಿ ಹನುಮಮ್ಮನವರ ಸೂಲಗಿತ್ತಿ ಸೇವೆ ಹೇಗೆಂದರೆ ಗರ್ಭಿಣಿ ಹೆಣ್ಣು ಮಗುವಿಗೆ, ಉತ್ತಮ ಆಹಾರ ಕೋಡಿಸಲು ಸಲಹೆ ನೀಡುವುದು, ಆರೋಗ್ಯಕರ ಧೈರ್ಯ ಸಾತ್ವಾನ ತುಂಬುವ ಮೂಲಕ ಸಿಜರಿನ್ ಹೆರಿಗೆ ಇಲ್ಲದೆ ಆರೋಗ್ಯಕರವಾದ ಹೆರಿಗೆ ಮಾಡಿಸಿ, ಹಲವಾರು ಮನೆಗಳ ಆರ್ಥಿಕತೆಯನ್ನು ಉಳಿಸುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ ಸೂಲಗಿತ್ತಿ ಹನುಮಮ್ಮನವರು.
ಇವರ ಸೇವೆ ಗ್ರಾಮದ ಅಕ್ಕ ಪಕ್ಕದಲ್ಲಿ ಖ್ಯಾತಿ ಪಡಿದು, ಇತರರು ಸಹ ಆರೋಗ್ಯಕರ ಹೆರಿಗೆ ಮಾಡಿಸಲು ತುಂಬಾ ಜನ್ರು ಕರ್ಕೊಂಡು ತಮ್ಮ ತಮ್ಮ ಊರಿಗೆ ಕರೆದುಕೊಂಡು ಹೋಗುತ್ತಾರೆ, ಹನುಮಮ್ಮನವರ ನಿಸ್ವಾರ್ಥ ಸೇವೆ ಎಂತತೆಂದರೆ ಅವರು ಯಾವುದೇ ನಿಸ್ವಾರ್ಥ ಪ್ರತಿ ಪಾಲಾಕ್ಷ ಇಲ್ಲದೆ ಗರ್ಭಿಣಿಯ ಹೆಣ್ಣು ಮಗುವ ಜೀವ ಕಾಪಾಡುವುದು ಸುಲಭ ಆರೋಗ್ಯಕರ ಹೆರಿಗೆ ಮಾಡಿಸುವುದು, ಹಾಗೆ ನವಜಾತ ಶಿಶುವಿಗೆ ಆರೋಗ್ಯಕರ ಪೂರ್ಣವಾದ ಸೇವೆ ನೀಡುವುದು ನನ್ನ ಜೀವನದ ಪರಮ ಕರ್ತವ್ಯ, ಇಂದಿನ ಕಾಲದಲ್ಲಿ ಆಸ್ಪತ್ರೆ ಹೆಸರಿನಲ್ಲಿ ಸುಲಿಗೆ ಮಾಡುವವರ ಸಮಯದಲ್ಲಿ ಹನುಮಮ್ಮ ನವರು ಪ್ರತ್ಯಕ್ಷ ವೈದ್ಯ ನಾರಾಯಣ ಎಂಬ ಮಾತು ನೆನಪಾಗುತ್ತದೆ , ಅವರು ತಮಗೆ ತಿಳಿದ ಅನುಭವದಿಂದ ಜನಸೇವೆ ಮಾಡುತ್ತಿದ್ದು. ದುಡ್ಡಿಗಾಗಿ ಯಾವತ್ತೂ ಹೆರಿಗೆ ಮಾಡಿಸಿಲ್ಲ. ಇಂತಹ ಜಾನಪದ ಸುಗಡಿನ ಸೂಲುಗಿತ್ತಿಯರನ್ನು ಸ್ಥಳೀಯ ಸಂಸ್ಥೆಗಳು, ಸರ್ಕಾರಗಳು ಗೌರವಿಸಿ, ಇವರ ನಿಸ್ವಾರ್ಥ ಸೇವೆಗೆ ದುಕ್ತವಾದ ಕೊಡುಗೆಯನ್ನು ನೀಡಬೇಕು.. ಅವರ ವಿಶ್ವಾಸ ಸೇವೆ ಜನ ಮಂಡನೆ ಗಳಿಸಿ, ಇತರರಿಗೂ ಸಹ ಪ್ರೇರಣೆ ಯಾಗಬೇಕು.
ಮಾದುರು ಹನುಮಮ್ಮನವರ ಮಾತೇಂದರೆ ಗರ್ಭಿಣಿಯರ ಹಿತ ಹಾಗೂ ಮಗುವಿನ ಆರೋಗ್ಯ, ಕಾಳಜಿಯಿಂದಲೇ ಹೆರಿಗೆ ಮಾಡಿಸುತ್ತೇನೆ. ಎಲ್ಲಾ ತಾಯಂದಿರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಎನ್ನುವುದು ಅಂತ ಕರ್ಣದ ಮಾತಾಗಿದೆ...
-ಮಾದೂರು ಹನುಮಮ್ಮ, ಹಂಪಾಪಟ್ಟಣ

Comments
Post a Comment