ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ :ಡಾ.ಬಸವರಾಜ ಕ್ಯಾವಟರ್ ಒತ್ತಾಯ

 ಜೂಡಿ ನ್ಯೂಸ್ : 

ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ :ಡಾ.ಬಸವರಾಜ ಕ್ಯಾವಟರ್ ಒತ್ತಾಯ

ಕೊಪ್ಪಳ: ಕೂಡಲೇ ರಾಜ್ಯ ಸರಕಾರ, ಆಯಾ ಜಿಲ್ಲಾವಾರು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರ ಹಿತ ಕಾಯಬೇಕೆಂದು ಬಿಜೆಪಿ ರಾಜ್ಯ ಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾರುಕಟ್ಟೆಯಲ್ಲಿ ಏಕಾಏಕಿ ಮೆಕ್ಕೆಜೋಳ ಬೆಲೆ ಇಳಿಕೆಯಾಗಿರುವುದರಿಂದ ಅನ್ನದಾತರು ಅಕ್ಷರಶ ನಲುಗಿ ಹೋಗಿದ್ದಾರೆ. ಕ್ವಿಂಟಲ್ಗೆ 1600-1800 ರೂ. ಬಂದು ನಿಂತಿರುವುದು ಅತ್ಯಂತ ಸೋಜಿಗವಾಗಿದೆ.

ಅಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರು ಚಿಂತಾಕ್ರಾಂತರಾಗಿದ್ದಾರೆ.‌ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗೆ ಮಾರಿದರೇ ಮಾಡಿದ ಖರ್ಚು ಕೂಡ ಬರುವುದಿಲ್ಲ.

ಅಲ್ಲದೆ, ಈ ಬಾರಿ ಯೂರಿಯಾ ರಸಗೊಬ್ಬರ ಅಭಾವ ಸೇರಿ ನಾನಾ ಕಾರಣಗಳಿಂದ ರೈತರು ಪಡಬಾರದ ಯಮಯಾತನೆ ಪಟ್ಟಿದ್ದಾರೆ.

ಇಂತಹ ಸಂದರ್ಭದಲ್ಲಿ ಬೆಲೆಯೂ ಇಳಿಕೆಯಾಗಿರುವುದು ರೈತರಿಗೆ ಗಾಯದ ಮೇಲೆ ಬರ ಎಳೆದಂತ ಅನುಭವವಾಗುತ್ತಿದೆ.

ಈ ಹಿಂದೆ ಇಂತಹದ್ದೆ ಪರಿಸ್ಥಿತಿ ಎದುರಾಗಿದ್ದಾಗ ನಮ್ಮ ಬಿಜೆಪಿ ಸರಕಾರ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಿತ್ತು.

ಆದರೆ, ಮೆಕ್ಕೆಜೋಳ ಬೆಲೆ ಇಳಿದು, ರೈತರು ಸಂಕಷ್ಟ ಅನುಭವಿಸಲು ಪ್ರಾರಂಭಿಸಿ, 15 ದಿನ ಮೇಲಾದರೂ ರಾಜ್ಯ ಕಾಂಗ್ರೆಸ್ ಸರಕಾರ, ಇನ್ನೂ ಕಣ್ಣೆತ್ತಿ ನೋಡದಿರುವುದು ನಾಚಿಕೇಡಿತನದ ಸಂಗತಿಯಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿಯುವುದು ಸರಿಯಲ್ಲ. ಕೂಡಲೇ ರಾಜ್ಯ ಸರಕಾರ, ಆಯಾ ಜಿಲ್ಲಾವಾರು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ರೈತರ ಹಿತ ಕಾಯಬೇಕೆಂದು ವೈದ್ಯ ಬಸವರಾಜ ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.

- ಡಾ. ಬಸವರಾಜ್ ಎಸ್ ಕ್ಯಾವಟರ್

ರಾಜ್ಯ ಕಾರ್ಯಕಾರಿಣಿ ಸದಸ್ಯರು ಹಾಗೂ ನಿಕಟಪೂರ್ವ ಬಿಜೆಪಿ ಅಭ್ಯರ್ಥಿಗಳು ಕೊಪ್ಪಳ ಲೋಕಸಭಾ ಕ್ಷೇತ್ರ

Comments